ಅಯೂಥಯ

ಮಧ್ಯ ಥಾಯ್‍ಲೆಂಡಿನ ದಕ್ಷಿಣದಲ್ಲಿ ಬ್ಯಾಂಕಾಕಿಗೆ 64 ಕಿ.ಮೀ. ದೂರದಲ್ಲಿರುವ (ಐಥಿಯ) ಪಟ್ಟಣ. ವ್ಯಾಪಾರಕೇಂದ್ರ. ಛಾವೋಫ್ರಾಯ (ಮೀನಾಂ) ಮತ್ತು ಪಾಸಾಕ್ ಎಂಬ ನದಿಗಳ ಸಂಗಮದಲ್ಲಿರುವ ಒಂದು ದ್ವೀಪದಲ್ಲಿದೆ. ಸುತ್ತಲೂ ಬತ್ತ, ಇತರ ಧಾನ್ಯಗಳು, ಹಣ್ಣುಗಳು ಚೆನ್ನಾಗಿ ಬೆಳೆಯುತ್ತವೆ. ಮೀನುಗಾರಿಕೆಯೂ ಹಂದಿ ಸಾಕುವುದೂ ಈ ಪ್ರದೇಶದ ಮುಖ್ಯ ಉದ್ಯಮಗಳು. ಆದರೆ ವಾಣಿಜ್ಯ ಸಾಮಗ್ರಿಸಾಗಣೆ ಮತ್ತು ಜನರ ಪ್ರಯಾಣ ಹೆಚ್ಚಾಗಿ ಮೋಟಾರು ದೋಣಿಗಳ ಮೂಲಕ ನಡೆಯುತ್ತವೆ. ಇದು (14)ನೆಯ ಶತಮಾನದಿಂದ (1767)ರವರೆಗೆ ಸಯಾಂ ರಾಜ್ಯದ ರಾಜಧಾನಿಯಾಗಿತ್ತು; ಅನಂತರ ಬರ್ಮೀಯರ ದಾಳಿಯಿಂದ ವಿಶೇಷವಾಗಿ ನಾಶವಾಯಿತು. ಇಲ್ಲಿ ಬೌದ್ಧರ ಹಳೆಯ ಪಗೋಡಾಗಳ ಮತ್ತು ಅರಮನೆಗಳ ಅವಶೇಷಗಳಿವೆ.		    
(ಎ.ಕೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ